

3rd November 2025

-:ಸಿರಿಗನ್ನಡ ಉತ್ಸವ:-
ಕನ್ನಡ ನಾಡು ಪುಣ್ಯದ ಬೀಡು,
ಸಾವಿರ ಸಂಸ್ಕೃತಿಗಳಿಗೆ ನೆಲೆಯ ಹಾಡು,
ಸುಂದರ ಸಂಪ್ರೀತಿ ಸೌಹಾರ್ದತೆ ನೋಡು,
ವಚನ, ಕಾವ್ಯ ಅರಿವಿನ ದೀಪದ ಸಿರಿಗನ್ನಡ ನಾಡು.
ಕನ್ನಡದ ಕಾವೇರಿ ಕೃಷ್ಣಯರ ನಾಡಿದು, ಹಚ್ಚ ಹಸಿರ ಗೂಡಿದು ಸಾಂಸ್ಕೃತಿಕ ಭೌಗೋಳಿಕ ಚಿನ್ನದ ತೇರಿದು, ಹಳದಿ ಕೆಂಪು ಬಾವುಟ ಹಿಡಿದ ಭುವನೇಶ್ವರಿಯ ನಾಡಿದು,
ರತ್ನತ್ರೆಯರ ಕವಿಪುಂಗವರ ಶ್ರೇಷ್ಠ ಮನೆತನಗಳ ತವರೂರಿದು,
ಎಲ್ಲೆಲ್ಲೂ ಕನ್ನಡದ ಕಲರವ ಮೂಡಿದೆ
ಮನಸ್ಸಿಗೆ, ಹೃದಯಕ್ಕೆ ಸವಿಭಾವ ತಂದಿದೆ,
ಹೃದಯದಲಿ ಕನ್ನಡ ಡಿಂಡಿಮ ಮೊಳಗಿದೆ,
ತಾಯಿ ಭುವನೇಶ್ವರಿಗೆ ಮನವು ಶರಣೆಂದಿದೆ,
ಎಲ್ಲೆಲ್ಲೂ ಕೇಳಲಿ ಕನ್ನಡದ ಸ್ವರ ಸಂಗಮದಲಿ,
ವಿಶ್ವದೆಡೆ ಸಾರಲಿ ಕನ್ನಡದ ಝೇಂಕಾರ ಕಹಳೆಯಲಿ,
ಅಖಂಡ ಕರ್ನಾಟಕದ ಹೃದಯ ಕಣ್ತೆರೆಯಲಿ,
ಸಿರಿಗನ್ನಡ ಉತ್ಸವದ ತೇರು ಸಂಭ್ರಮದಿ ಸಾಗುತಿರಲಿ....
- ರಶ್ಮಿ ಪ್ರಶಾಂತ್ ಕುಲಕರ್ಣಿ
ಕನ್ನಡ ರಾಜ್ಯೋತ್ಸವದ
ಶುಭಾಶಯಗಳು.
ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಕುಷ್ಟಗಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ.

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.